ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ನವರು ಹೊಸ ಗಿಮಿಕ್ ಮಾಡೋಕೆ ಶುರು ಹಚ್ಚಿದ್ದಾರೆ. ಬಿಹಾರದ ಚುನಾವಣೆ ಸಂದರ್ಭದಲ್ಲಿ ಯಾವ ರೀತಿ "ಬಿಹಾರಕ್ಕೆ ಬಹಾರಿ(ಹೊರಗಿನವ) ಬೇಡ" ಅನ್ನುವ ತಂತ್ರ ಉಪಯೋಗಿಸಿದ್ದರೋ ಅದೇ ರೀತಿ ಇಲ್ಲೂ ಉಪಯೋಗಿಸಲು ಹೊರಟ ಹಾಗಿದೆ. ಹೇಗಾದರೂ ಮಾಡಿ ತನ್ನ ಅಂತ್ಯವನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ತುಂಬಾ ಕೆಳಮಟ್ಟದ ರಾಜಕಾರಣಕ್ಕೆ ಮುಂದಾಗಿದೆ. ಎಷ್ಟು ಕೀಳು ಅಂದ್ರೆ ನಮ್ಮ ದೇಶದವರನ್ನೆ ಹೊರಗಿನಿಂದ ಬಂದವರು ಅನ್ನುವಷ್ಟು ಮಟ್ಟಿಗೆ.
ಇನ್ನು ಕೆಲವು ಕನ್ನಡ ಪರ ಸಂಘಟನೆಗಳನ್ನು ಬಿಜೆಪಿಯ ಮೇಲೆ ಎತ್ತಿ ಕಟ್ಟುವ ಮೂಲಕ ಬಿಜೆಪಿ ಕನ್ನಡ ವಿರೋಧಿ ಅನ್ನುವ ಪಟ್ಟಕಟ್ಟಲು ಶುರು ಹಚ್ಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕನ್ನಡದ ಏಳಿಗೆಗಾಗಿ ಏನೂ ಮಾಡಿಲ್ಲ ಅಂತ ಅವರಿಗೇ ಗೊತ್ತಾಗಿದೆ ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಮತ ಕೇಳಲು ಯಾವ ವಿಷಯಗಳು ಇಲ್ಲ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವನ್ನೇ ಸರಿಯಿಲ್ಲ ಅಂತ ಬಿಂಬಿಸಿ ಕೇಂದ್ರದ ಮೇಲೆ ಬಾಣವನ್ನು ತಿರುಗಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಧುರೀಣರಿಗೆ ನನ್ನ ಕೆಲವು ಪ್ರಶ್ನೆಗಳಿವೆ ಇವುಗಳಿಗೆ ಅವರು ಉತ್ತರಿಸಿದರೆ ನಾವೂ ಕೂಡ ಅಮಿತ್ ಶಾ ಹೊರಗಿನವರೆಂದೂ ಮತ್ತು ಬಿಜೆಪಿ ಕನ್ನಡ ವಿರೋಧಿ ಅಂತ ಒಪ್ಪಿಕೊಳ್ಳುತ್ತೇವೆ.
1. ಯಡಿಯೂರಪ್ಪನವರು ಕನ್ನಡದ ರೈತರಿಗೋಸ್ಕರ ದೇಶದಲ್ಲಿಯೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದರು ತಾವೇನು ಮಾಡಿದ್ದೀರಾ?
2. ಅಮಿತ್ ಶಾವರು ಕೇಳಿರೋದು ಕೇಂದ್ರ ಕೊಟ್ಟ ಲಕ್ಷ ಕೋಟಿ ಅನುದಾನ ಇನ್ನೂ ಯಾಕೆ ಉಪಯೋಗಿಸಿಲ್ಲ ಅಂತ. ಕನ್ನಡದ, ಕನ್ನಡಿಗರ ಅಭಿವೃದ್ಧಿಗೆ ಬಂದ ದುಡ್ಡನ್ನ ಯಾಕೆ ವಿನಿಯೋಗಿಸಿಲ್ಲ ಅಂತ ಕೇಳೋದು ತಪ್ಪಾ?
3. ತ್ರಿ ಭಾಷ ಸೂತ್ರ ಶುರು ಮಾಡಿದ್ದು ನಿಮ್ಮದೇ ಕಾಂಗ್ರೆಸ್ ಅವಾಗ ರಾಜ್ಯದಲ್ಲೂ ನಿಮ್ಮದೇ ಸರ್ಕಾರವಿತ್ತು. ನೀವು ಯಾಕೆ ಮುಂಚೆ ಮಾತಾಡಿಲ್ಲ?
4. ನೀವು ಇತ್ತೀಚೆಗೆ ಶುರು ಮಾಡಿದ ಕ್ಯಾಂಟೀನ್ಗೆ "ಇಂದಿರಾ ಕ್ಯಾಂಟೀನ್" ಅಂತ ಯಾಕೆ ಹೆಸರಿಟ್ಟಿದ್ದೀರ!? ಯಾಕೆ ಕರ್ನಾಟಕದಲ್ಲಿ ಕನ್ನಡಿಗರು ಸಿಗಲಿಲ್ಲವೇ?
5. ನಿಮ್ಮ ಅವಧಿಯಲ್ಲಿ ಸುಮಾರು 3500ಕ್ಕೂ ಹೆಚ್ಚು ಕನ್ನಡದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗಾಗಿ ನಿಮ್ಮ ಕನ್ನಡತನ ಹೊರಬರಲಿಲ್ಲವೇ?
6. ಅಲ್ಪಸಂಖ್ಯಾತರ ಓಲೈಕೆಗೋಸ್ಕರ ಕನ್ನಡ ವಿರೋಧಿ ಟಿಪ್ಪು ಜಯಂತಿ ಆಚರಣೆ ಶುರು ಮಾಡಿದವರು ನೀವು. ನಿಮಗೆ ಕನ್ನಡ ಏಕೀಕರಣಕ್ಕಾಗಿ ಮತ್ತು ಕನ್ನಡಕ್ಕಾಗಿ ಹೋರಾಡಿದ ಆಲೂರು ವೆಂಕಟ ರಾವ್ ನೆನಪಾಗಲಿಲ್ಲವೇ?
7. ಬೆಂಗಳೂರಿನ ಐಟಿ ಬಿಟಿ ಕಂಪೆನಿಗಳಲ್ಲಿ ಶೇಕಡ 70% ಅಧಿಕ ಉದ್ಯೋಗಿಗಳು ಹೊರಗಿನ ರಾಜ್ಯದವರು. ನಮ್ಮ ರಾಜ್ಯದವರಿಗೋಸ್ಕರ, ಕನ್ನಡಿಗರಿಗೋಸ್ಕರ ಮೀಸಲಾತಿ ತರಬಹುದಿತ್ತು ಆದರೆ ನೀವು ಅದರ ಬಗ್ಗೆ ದನಿ ಎತ್ತಿಲ್ಲ ಯಾಕೆ?
8. ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಕನ್ನಡದ ಮೇಲೆ ಪ್ರೀತಿ ಇರುವವರು ಕನ್ನಡದ ಶಾಲೆಗಳನ್ನು ಮೇಲೆತ್ತುವ ಪ್ರಯತ್ನ ಮಾಡಬೇಕು ಆದರೆ ಕಾಂಗ್ರೆಸ್ ಸರ್ಕಾರ ಅದಕ್ಕೆ ಏನು ಪರಿಹಾರ ಮಾಡಿಲ್ಲ ಯಾಕೆ?
9. ಹಣ ನುಂಗುವ ಆಸ್ಪತ್ರೆಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ ಸಿಗುವ ಹಾಗೆ ಮಾಡೋದು ರಾಜ್ಯ ಸರ್ಕಾರದ ಕೆಲಸ. ಆದರೆ ನೀವು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಯಾಕೆ? ಈ ಆಸ್ಪತ್ರೆಗೆ ಬರುತ್ತಿರುವವರು ಹೊರಗಿನವರೇ?
10. ಮಹಾದಾಯಿ ವಿಚಾರವನ್ನು ಮುಂದೆ ಇಟ್ಟುಕೊಂಡು ಕಾಂಗ್ರೆಸ್ ಹಾಗೂ ಇನ್ನಿತರ ಬೆಂಬಲಿಗ ಸಂಘಟನೆಗಳು ಬಿಜೆಪಿ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಪಿತೂರಿ ಮಾಡಿದ್ದೀರಿ. ಆದರೆ ಯಡಿಯೂರಪ್ಪನವರು ಗೋವಾದ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಹಾಗೆ ನೀವು ಅಲ್ಲಿನ ಕಾಂಗ್ರೆಸ್ಗೆ ಪತ್ರ ಬರೆಯಬಹುದಿತ್ತು ಅಥವಾ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಬೇಕಿತ್ತು ಯಾಕೆ ಮಾಡಿಲ್ಲ?
11. ನೀವು ಹೇಗೆ ಕನ್ನಡದ ವಿಚಾರ ಮುಂದೆ ಇಟ್ಟುಕೊಂಡು ಬೇರೆ ಭಾಷೆಗಳನ್ನು ವಿರೋಧ ಮಾಡ್ತೀರೋ ಹಾಗೆಯೇ ಕೊಡವರು ಮತ್ತು ತುಳುವರು ತಮ್ಮ ಭಾಷೆಗೆ ಮಾನ್ಯತೆ ಕೇಳುತ್ತಿದ್ದಾರೆ ಮತ್ತು ಒತ್ತಾಯಪೂರ್ವಕವಾಗಿ ಕನ್ನಡ ಹೇರಿಕೆ ಬೇಡ ಅನ್ನುತ್ತಾರೆ. ಇದಕ್ಕೆ ನೀವು ಬೆಂಬಲಿಸುತ್ತೀರ?
12. ಅಮಿತ್ ಶಾ ಹೊರಗಿನವರೆಂದು ಹೇಳುವ ನಿಮಗೆ ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ವಹಿಸಿರುವ ವೇಣುಗೋಪಾಲ್ ಹೋರಗಿನವರೆಂದು ಗೊತ್ತಾಗಲಿಲ್ಲ ಅನ್ನೋದು ವಿಪರ್ಯಾಸ!
13. ನಿಮ್ಮದೇ ಪಕ್ಷದ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಮರಾಠಿಗರ ಪರವಾಗಿ ಮಾತನಾಡಿದರು. ಕನ್ನಡಾಭಿಮಾನವಿರುವ ತಾವುಗಳು ಅವರನ್ನು ಪಕ್ಷದಿಂದ ಯಾಕೆ ಉಚ್ಛಾಟಿಸಲಿಲ್ಲ?
ಇನ್ನೂ ಹಲವಾರು ಪ್ರಶ್ನೆಗಳಿವೆ ಆದರೆ ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುವಷ್ಟು ಸಮರ್ಥರು ನೀವಲ್ಲ. ಮತ್ತಷ್ಟು ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿರಿ ಆದಷ್ಟು ಬೇಗ ಆ ಪ್ರಶ್ನೆಗಳು ನಿಮ್ಮ ಮುಂದೆ ಜನರೇ ಕೇಳಲಿದ್ದಾರೆ.
ರಿಂದ,
ನಿರ್ವಾಹಕ
56"
Comments
Post a Comment