ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮಹಾದಾಯಿ ವಿಚಾರವನ್ನು ಮುಂದೆ ಇಟ್ಟುಕೊಂಡು ಕಾಂಗ್ರೆಸ್ ಹಾಗೂ ಇನ್ನಿತರ ಬೆಂಬಲಿಗ ಸಂಘಟನೆಗಳು ರಾಜ್ಯವನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದ್ದಾರೆ. ಹಲವಾರು ಸಂಘಟನೆಯವರು ನಾವು ಕನ್ನಡ ರಕ್ಷಕರು, ಕನ್ನಡವನ್ನು ಉಳಿಸುತ್ತೇವೆ ಅಂತ ಎಲ್ಲಾ ಕಡೆ ಡಂಗುರ ಸಾರುತ್ತಾರೆ. ಅಸಲಿಗೆ ಈ ಪರಿ ಬಂದುಗಳನ್ನು ಮಾಡಿಸಿದ್ರೆ ಕನ್ನಡ ಎಲ್ಲಿ ಉಳಿಯುತ್ತೆ ಸ್ವಾಮಿ?.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಮಾರು 12 ಬಂದ್ಗಳಾಗಿವೆ, ಇವುಗಳಲ್ಲಿ ಪ್ರೇರೇಪಿತ ಬಂದ್ಗಳೇ ಜಾಸ್ತಿ. ಕಾಂಗ್ರೆಸ್ ಸರ್ಕಾರ ಎಲ್ಲಾ ಕಡೆ ಪೋಸ್ಟರುಗಳಲ್ಲಿ ನಮ್ಮ ನಡಿಗೆ ಅಭಿವೃದ್ಧಿಯ ಕಡೆಗೆ ಅಂತ ಹೇಳ್ತಾ ಪ್ರಚಾರ ಮಾಡ್ತಾರೆ. ಅಸಲಿಗೆ ಇಂತಹ ಬಂದ್ಗಳಿಂದ ಎಷ್ಟು ನಷ್ಟ ಇದೆ ಅನ್ನೋ ಪ್ರರಿಜ್ಙಾನನೇ ಇಲ್ಲ ಇವರಿಗೆ.
ಇವರಿಗೆ ಮಹಾದಾಯಿ ನದಿ ವಿಚಾರದಲ್ಲಿ ಅಷ್ಟೊಂದು ಕಾಳಜಿ ಇದ್ದರೆ ನೆರೆ ರಾಜ್ಯಗಳ ಆಡಳಿತ ಹಾಗೂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಭೆ ನಡೆಸಿ ಎಲ್ಲಾ ಬಗೆಯ ಪರಿಹಾರ ಸೂತ್ರಗಳನ್ನು ಚರ್ಚಿಸಲಿ. ಬಿಜೆಪಿಯವರು ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು ಆದರೆ ಗೋವಾ ಕಾಂಗ್ರೆಸ್ ಎಷ್ಟು ವಿರೋಧ ಮಾಡಿತ್ತು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಗೋವಾ ಕಾಂಗ್ರೆಸ್ನ ವಿರೋಧವಿದೆ ಎಂದು ಗೊತ್ತಾದ ಮೇಲೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಬೇಕಿತ್ತು ಅದನ್ನು ಬಿಟ್ಟು ಈ ರೀತಿ ಬಂದ್ ಮಾಡಿದರೆ ರಾಜ್ಯಕ್ಕೆ, ಜನತೆಗೆ ನಷ್ಟ ಹೊರತು ಯಾರಿಗೂ ಲಾಭ ಆಗಲ್ಲ.
ಇಂತಹ ನಾಟಕಗಳನ್ನು ಮಾಡಿಕೊಂಡೇ ದಶಕಗಷ್ಟು ಆಡಳಿತ ನಡೆಸಿರುವ ಕಾಂಗ್ರೆಸ್ನಿಂದ ಏನು ನಿರೀಕ್ಷಿಸಬಹುದು ಹೇಳಿ?. ಎಲ್ಲಾ ಬಿಟ್ಟಿ ಭಾಗ್ಯಗಳನ್ನು ಕೊಟ್ರೂ ಸರ್ಕಾರ ಜನರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದೆ ಹಾಗಾಗಿ ಇಂತಹ ನಾಟಕಗಳನ್ನು ಮಾಡಿಯಾದರು ತಾವು ಮಾಡಿದ ತಪ್ಪನ್ನು ಬಿಜೆಪಿಯವರ ಮೇಲೆ ಎತ್ತಿ ಕಟ್ಟುವ ಕೆಲಸ ಸತತವಾಗಿ ಮಾಡುತ್ತಿದ್ದಾರೆ. ಇಂತಹ ನಾಟಕಗಳಿಗೆ ಜನ ಮನಸೋಲದೆ ಅಭಿವೃದ್ಧಿಯ ಕಡೆಗೆ ಒಲವು ತೋರಿಸಬೇಕು ಹಾಗು ಮುಂಬರುವ ಚುನಾವಣೆಯಲ್ಲಿ ಸರಿಯಾದ ಶಾಸ್ತಿ ಮಾಡಬೇಕು.
ರಿಂದ,
ಸತೀಶ್ ವಾಗ್ಳೆ
ಸತೀಶ್ ವಾಗ್ಳೆ


Comments
Post a Comment